Kannada Rajyotsava

ಧರಿಸು ಕನ್ನಡವ, ಆದರಿಸು ಕನ್ನಡವ..!!

ಕಣ್ ಮುಚ್ಚಿ ತೆರೆಯುವಷ್ಟರಲ್ಲಿ ಪಟಪಟನೆ ಎರಡು ವರುಷಗಳನ್ನು ಮುಗ್ಸಿ ಮೂರರ ಹೊಸ್ತಿಲಲಿ ನಿಂತಿದೆ ನಿಮ್ಮ Aziteez. ಕನ್ನಡ ಎನೆ ಕುಣಿದಾಡುತ, ಮೂಗ್ನಲ್ಲೂ ಕನ್ನಡ ಮಾತಾಡುತ ನೀವು ಬೆಳೆಸಿದ್ದು ಕೇವಲ ನಮ್ಮನ್ನಲ್ಲ..  ಕನ್ನಡವನ್ನ.. ಕರ್ನಾಟಕದ ವ್ಯಾಪ್ತಿಯನ್ನು.. ನಾಡಿನ ನುಡಿ ನಾಡಿಯ ನಡೆಯನ್ನ..

ಕನ್ನಡಕ್ಕಾಗಿ ನಾವೋ ನಮಗಾಗಿ ಕನ್ನಡವೋ ಎಂಬ ಜಿಜ್ಞಾಸೆಯಲ್ಲಿಯೇ ಶುರುವಾದ  Aziteez ಎರಡು ವಸಂತಗಳನ್ನು  ದಾಟುತ್ತ ಈ ರಾಜ್ಯೋತ್ಸವಕ್ಕೆ  ಮೂರು ಹೊಸ ವಿನ್ಯಾಸಗಳನ್ನು  ಪ್ರಸ್ತುತಪಡಿಸುತ್ತಿದೆ.  ಈ ವಿನ್ಯಾಸಗಳಲ್ಲಿ  ಕನ್ನಡದ ಸೊಗಡಿನ ಚಿತ್ತಾರವಿದೆ. ಉತ್ತರ ದಕ್ಷಿಣ ಬೆಸೆಯುವ ವಿಸ್ತಾರವಿದೆ.  ಅಕ್ಷರಗಳ ಹೊಸ ಪ್ರಯೋಗದ ಪ್ರಸ್ತಾರವಿದೆ. ಇವುಗಳೆಲ್ಲವುದರ ಜೊತೆಜೊತೆಗೆ ಪ್ರಪ್ರಥಮವಾಗಿ ಖಾದಿ ಕುರ್ತಾವನ್ನು ಪರಿಚಯಿಸುತ್ತಿರುವ ಹೆಮ್ಮೆ aziteez ನದು.  ನೈಸರ್ಗಿಕ ವರ್ಣದ ಈ ವಸ್ತ್ರಗಳು ಕನ್ನಡದ ಮನೆಗಳ ಕೈ ಮಗ್ಗಗಳಲ್ಲಿ ತಯಾರಾದವುಗಳು. 

ಇನ್ನೇಕೆ ತಡ?  ನಮ್ಮ www.aziteez.com ಗೆ ಭೇಟಿ ನೀಡಿ. ನಿಮ್ಮ ಆಯ್ಕೆಯ ಅಂಗಿಗಳನ್ನು, ಕುರ್ತಾಗಳನ್ನು ಮನಬಂದಂತೆ ಖರೀದಿಸಿ..!! ಕನ್ನಡದ ಕಂಪನ್ನು ಪಸರಿಸಿ..!! ನಮ್ಮ ನಿತ್ಯ ವ್ಯವಹಾರದಲ್ಲಿ ಕನ್ನಡ ಪಾಲ್ಗೊಳ್ಳಲಿ.. ಹಾಲ್ಗಡಲ ಒಡಲ ಒಳಗಿಂದ ಬಂದ ಸುಧೆಯಂತೆ ಈ ಭಾಷೆ .. ಅದಕ್ಕೆ ಈ ಕನ್ನಡದೊಳ್ ಸುಧೆಯುಂಟು..!!

 

Displaying 1 - 23 of 23