Moognal Kannada Round

₹ 399.00
Size

Description

 
ಮನಸು ಕನ್ನಡವಾಗಿದೆ, ಮನೆ ಕರ್ನಾಟಕವಾಗಿದೆ, ಇಂತಿರಲು ಮೈಮೇಲಿನ ಧಿರಿಸು ಕನ್ನಡವಾದರೆ? ಇದೇ ನವೆಂಬರಿನಲ್ಲಿ ಕರ್ನಾಟಕದ ಇನ್ನೊಂದು ಹುಟ್ಟುಹಬ್ಬದ ಸಂಭ್ರಮಕ್ಕೆ, ಆಚರಣೆಗೆ Aziteez ನ ಹೊಸ ಕನ್ನಡದ ಅಂಗಿ ಸಿದ್ಧವಿದೆ. ಇದು ಕೇವಲ ಅಂಗಿಯೊಂದರ ಮಾತಲ್ಲ. ನಾಡು – ನುಡಿಯ ಸ್ಮರಣೆಯ ಜೊತೆ ಜೊತೆಗೆ ಕನ್ನಡದ ಅಂಶಗಳನ್ನು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗ್ಗೆ ನಮ್ಮ ಕಳಕಳಿಯ ಪ್ರಯತ್ನ .ನಮ್ಮ ಹುಟ್ಟುಹಬ್ಬಕ್ಕೆಲ್ಲ ಹೊಸ ಬಟ್ಟೆ ತೊಟ್ಟು ಸಂಭ್ರಮ ಪಡುವ ನಾವು, ಏಕೆ ಈ ವರ್ಷ ನಮ್ಮ ಪ್ರೀತಿಯ ನೆಲದ ಹುಟ್ಟುಹಬ್ಬಕ್ಕೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಬಾರದೇಕೆ ಎಂಬ ಖುಷಿಯ ವಿಚಾರದೊಂದಿಗೆ ಈ ಅಂಗಿ ಅನಾವರಣಗೊಳ್ಳುತ್ತಿದೆ. 
 
ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೆ, ಮೂಗ್ನಲ್ ಕನ್ನಡ್ ಪದವಾಡ್ತೀನಿ ನನ್ ಮನಸನ್ ನೀ ಕಾಣೆ.. ಜಿ.ಪಿ.ರಾಜರತ್ನಂರವರ ರತ್ನ ನುಡಿಗಳು ನಮ್ಮ ವಿನ್ಯಾಸಕ್ಕೆ ಸ್ಪೂರ್ತಿ. ಬಾಯಿ ಹೊಲಿದಿದ್ದರೂ ಕನ್ನಡವನ್ನಾಡುವ ನಮ್ಮ ಚಿತ್ರವೇ ಅಂಗಿಯ ಮೇಲಿದೆ. ಈ ಅಂಗಿ ನಮ್ಮದೇ ಪ್ರತಿಬಿಂಬ. ಕನ್ನಡಕ್ಕಾಗಿ ನಡೆಸಿರುವ ಕಿರು ಪ್ರಯತ್ನದ ಜೊತೆ ನಿಮ್ಮ ಕೈಯಿರಲಿ. ಅದೇ ಕೈ ಕಲ್ಪವೃಕ್ಷವಾಗಲಿ. ಎರಡು ಮಾದರಿಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಅಂಗಿಯ ಪೂರ್ವರೂಪವಷ್ಟೇ ಇಲ್ಲಿದೆ. ಖರೀದಿಸುವವರು ನಮ್ಮ ತಾಣ www.aziteez.com ಗೆ ಭೇಟಿ ನೀಡಿ. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಗಳು ಬೇಕಾದಲ್ಲಿ 996028466 ಸಂಪರ್ಕಿಸಿ.
 
ಆದರಿಸು ಕನ್ನಡವ. ಆಧರಿಸು ಕನ್ನಡವ.ಧರಿಸು ಕನ್ನಡವ.